Step into an infinite world of stories
4.7
Personal Development
ಒಂದು ಸಂಬಂಧ ಬೆಳೆದು ಗಟ್ಟಿಗೊಳ್ಳಬೇಕಾದ್ರೆ ವರ್ಷಗಳೇ ಹಿಡಿಯುತ್ತೆ. ಆದರೂ ಅದು ಉಳಿದು ಇನ್ನಷ್ಟು ಸಧೃಡವಾಗಬೇಕಾದ್ರೆ ನಿರಂತರ ಪ್ರೀತಿ, ವಿಶ್ವಾಸ, ಮುಖ್ಯವಾಗಿ ಮಾತುಗಳು ಬೇಕು. ಎಲ್ಲ ಸಂಬಂಧಗಳನ್ನು ಜೀವಂತವಾಗಿಡಬಲ್ಲ ದಿವ್ಯಶಕ್ತಿ ಇರುವುದು ಈ ಮಾತುಗಳಿಗೆ ಮಾತ್ರ. ಅಂಥಹ ಮಾತುಗಳೇ ಇರದ ಬರಡು ವಾತಾವರಣದಲ್ಲಿ ಸಂಬಂಧಗಳ ಕೊಂಡಿಗಳು ಶಿಥಿಲಗೊಂಡು ಒಂದೊಂದಾಗಿ ಕಳಚಿಕೊಳ್ಳುತ್ತಾ ಒಂದು ದಿನ ನಾವು ಅಕ್ಷರಶಃ ಒಂಟಿಯಾಗಿ ಬಿಡುತ್ತೇವೆ. ಸಮಸ್ಯೆಗಳ ಕಾರಣಗಳು ಏನೇ ಇರಲಿ, ಆದರೆ ಪರಿಹಾರ ಒದಗಿಸುವ ಬೀಜಮಂತ್ರ ಒಂದೇ. ಅದು ಮಾತು. ಮಾತು ಮನೆ ಕೆಡಸಿತು ಅಂತಾರೆ. ಆದರೆ ಮಾತೇ ಆಡದಿದ್ದರೆ ನಾವೇ ಪ್ರೀತಿಯಿಂದ ಕಟ್ಟಿದ ಸಂಬಂಧಗಳ ಸೌಧಗಳು ನಮ್ಮ ಕಣ್ಣೆದುರಲ್ಲೇ ಕುಸಿದು ಹೋಗುವುದು ನಿಶ್ಚಿತ. ಮಾತಿನ ಮಹಿಮೆ ಏನೆಂದು ನಿಳಿಸಿಕೊಡುವುದೇ ಈ ಪುಸ್ತಕದ ಉದ್ದೇಶ. ಈ ಪುಸ್ತಕ ಓದಿ ಕೆಳಗಿಡುವಷ್ಟರಲ್ಲಿ ನಿಮ್ಮೆಲ್ಲಾ ಸಂಬಂಧಗಳಲ್ಲಿ ಚೈತನ್ಯ ತುಂಬಿ ನಿಮ್ಮಲ್ಲಿ ನವ ಜೀವನೋತ್ಸಾಹ ತುಂಬುವುದು ಗ್ಯಾರಂಟಿ. ಇಟ್ಸ್ ಮೈ ಪ್ರಾಮಿಸ್. ನಿಮ್ಮೆಲ್ಲಾ ಸಂತಸಗಳಿಗೆ ಕಾರಣವಾಗಬಲ್ಲ ಸಂಬಂಧಗಳ ಕೊಂಡಿಗಳು ಕಳಚುವ ಮುನ್ನ... ಸ್ವಲ್ಪ ಮಾತಾಡಿ ಪ್ಲೀಸ್
© 2021 Storyside IN (Audiobook): 9789354830549
Release date
Audiobook: 16 September 2021
English
India