Step into an infinite world of stories
ಭಾರತದಲ್ಲಿ ದೇವರು ನಮ್ಮ ಆತ್ಮವಿಶ್ವಾಸ, ಭರವಸೆ, ಹೋರಾಟ, ಅಸ್ಮಿತೆ ಎಲ್ಲದಕ್ಕೂ ರೂಪಕ. ಲೋಕನಿಂದೆಗೆ ಒಳಗಾದವರಿಗೆ ದೇವರೇ ದಿಕ್ಕು. ನೀನು ದೇವರನ್ನು ನೋಡಬೇಡ ಅಂದವರನ್ನು ಧಿಕ್ಕರಿಸಿ ದೇವರು ಕನಕನಿಗೆ ಕಾಣಿಸಿಕೊಳ್ಳುವುದು, ಗಂಡನಿಂದ ಅತ್ತೆಯಿಂದ ತೊಂದರೆಪಟ್ಟ ಸಕ್ಕೂಬಾಯಿಗೆ ದೇವರು ನೆರವಾಗುವುದು, ಹೇಮರೆಡ್ಡಿ ಮಲ್ಲಮ್ಮನನ್ನು ಕಾಯುವುದು, ಕುಚೇಲನ ಸಹಾಯಕ್ಕೆ ಬರುವುದು, ಮೊಸಳೆಯ ಬಾಯಿಯಿಂದ ಗಜರಾಜನನ್ನು ರಕ್ಷಿಸುವುದು - ಹೀಗೆ ಎಂತೆಲ್ಲ ಕೆಲಸಗಳನ್ನೆಲ್ಲ ನಮ್ಮ ದೇವರ ಕೈಯಲ್ಲಿ ನಾವು ಮಾಡಿಸುತ್ತೇವೆ. ಶೋಷಣೆ ಮತ್ತು ಅನ್ಯಾಯದ ವಿರುದ್ಧ ಭಾರತದ ದೇವರುಗಳು ಹೋರಾಡಿದಷ್ಟು ಮತ್ಯಾವ ದೇವರೂ ಹೋರಾಡಿದಂತಿಲ್ಲ. ಇಲ್ಲಿ ದೇವರು ಮನುಷ್ಯನಾಗುವುದು, ಮನುಷ್ಯ ದೇವರಾಗುವುದು ಎರಡೂ ಸಾಧ್ಯವಾದ್ದರಿಂದ ನಾವು ನಿಜವಾಗಿಯೂ ನಂಬಬೇಕಾದದ್ದು ಇದನ್ನೇ. ಮನುಷ್ಯ ಕೂಡ ದೇವರಾಗಬಲ್ಲ, ದೇವರು ಕೂಡ ಮನುಷ್ಯನಾಗಬಲ್ಲ.
ಹಾಗಿದ್ದರೆ ನೀವು ದೇವರನ್ನು ನಂಬಬೇಕಾ ಅಥವಾ ಅವನು ನಂಬುವಂತೆ ಬಾಳಬೇಕಾ?
© 2022 Storyside IN (Audiobook): 9789354831027
Release date
Audiobook: 15 March 2022
English
India