Step into an infinite world of stories
ವಸುಧೇಂದ್ರ ಅವರ ವಿಶಿಷ್ಟ ಕಾದಂಬರಿ ’ತೇಜೋ ತುಂಗಭದ್ರ’. ವಿಜಯನಗರ ಸಾಮ್ರಾಜ್ಯ, ಪೋರ್ಚುಗೀಸ್, ಬಹುಮನಿ ಸುಲ್ತಾನರ ಕಾಲದ ಇತಿಹಾಸವನ್ನು ಅಧ್ಯಯನ ಮಾಡಿ ಬರೆದಿದ್ದು, ಆ ಕಾಲದ ಜನಜೀವನವನ್ನು ಕಟ್ಟಿಕೊಡುವ ಸಾಮಾಜಿಕ ಕಾದಂಬರಿಯಾಗಿದೆ.
15-16ನೇ ಶತಮಾನದ ಸಾಮಾನ್ಯರ ಹಾಗೂ ರಾಜ್ಯಾಡಳಿತವನ್ನು ಚಿತ್ರಿಸಿರುವ ಕೃತಿ ಇದು. ಇಲ್ಲಿ ಹೃದಯವಿರುವ ಜನಸಾಮಾನ್ಯರೇ ನಾಯಕರು. ಚರಿತ್ರೆ ಮತ್ತು ಸಮಕಾಲೀನತೆಗಳ ಗಡಿರೇಖೆಗಳನ್ನು ಅಳಿಸಿ ಹಾಕುವ ಸತ್ಯ, ಸೃಜನಶೀಲತೆಯ ಹಿನ್ನೆಲೆಯಲ್ಲಿ ಕಂಡರಿಸಲಾಗಿದೆ.
ಶತಮಾನಗಳ ಹಿಂದಿನ ವಿಶಿಷ್ಟ ಕಥೆಯನ್ನು ಯಾವುದೇ ಗೊಂದಲಗಳಿಲ್ಲದೇ, ಪ್ರಸ್ತುತ ಕಾಲಮಾನಕ್ಕೆ ಒಗ್ಗೂಡಿಸಿದ ಕಲೆಯ ಚಿತ್ರಣ ಇದಾಗಿದೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡಮಾಡುವ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ದೊರೆತಿದೆ.
2019ರಲ್ಲಿ ಮೊದಲ ಮುದ್ರಣ ಕಂಡಿದ್ದ ಈ ಪುಸ್ತಕವು ಇದುವರೆಗೆ ಹನ್ನೊಂದು ಮುದ್ರಣಗಳನ್ನು ಕಂಡಿದೆ ಹಾಗೂ ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿದೆ.
© 2023 Storyside IN (Audiobook): 9789356043176
Release date
Audiobook: 15 May 2023
English
India