Step into an infinite world of stories
‘ನೂರು ಸಿಂಹಾಸನಗಳು’ ಮಲಯಾಳಂ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದವಾಗಿರುವ ಒಂದು ಕಿರು ಕಾದಂಬರಿ. ಇದರ ಮೂಲ ಲೇಖಕರು ಜಯಮೋಹನ್ ಅವರು, ಇದು ಐ.ಎ.ಎಸ್. ಅಧಿಕಾರಿಯೊಬ್ಬರ ಆತ್ಮಕಥೆ.
ಇದನ್ನು ಕನ್ನಡಕ್ಕೆ ಅನುವಾದ ಮಾಡಿರುವವರು ಶಿವಮೊಗ್ಗದಲ್ಲಿ ನೆಲೆಸಿರುವ ಕೆ. ಪ್ರಭಾಕರನ್ ಅವರು.
ಈ ಕಿರು ಕಾದಂಬರಿಯ ಮೂಲ ನಿರೂಪಕ ತೀರಾ ಬಡತನದಿಂದ ಬಂದು ಓದಿ ಸಾಧಿಸಿದವನು (ಒಬ್ಬ ಐ.ಎ.ಎಸ್. ಅಧಿಕಾರಿ). ಒಬ್ಬ ಶ್ರೀಮಂತ ಕುಟುಂಬದ ಅಥವಾ ಚೆನ್ನಾಗಿ ಓದಿಕೊಂಡ ಮೇಲ್ಜಾತಿಯ ಮನೆಯಿಂದ ಬಂದು ಐ.ಎ.ಎಸ್. ಮಾಡುವುದು, ಅಥವಾ ಒಳ್ಳೆಯ ಅಧಿಕಾರಿಯಾಗುವುದು, ಅಥವಾ ಬದುಕಿನಲ್ಲಿ ಉನ್ನತ ಸಾಧನೆ ಮಾಡುವುದು ಅಷ್ಟೇನೂ ಕಷ್ಟದ ಕೆಲಸವಲ್ಲ.
ಬದುಕಿನಲ್ಲಿ ಯಾವ ಬೆಂಬಲವೂ ಇಲ್ಲದೆ ವ್ಯಕ್ತಿ ತನ್ನ ವೈಯುಕ್ತಿಕ ಹೋರಾಟದ ಮೂಲಕ ಸಾಧನೆ ಮಾಡಿದರೆ ಅದು ಮಹಾ ಸಾಧನೆ ಎಂದು ಹೇಳಬಹುದು. ಅದರಲ್ಲೂ ಸಮಾಜದಿಂದ ತಿರಸ್ಕರಿಸಲ್ಪಟ್ಟ, ತೀರಾ ಕೆಳಮಟ್ಟದ, ಅವರನ್ನು ಮುಟ್ಟಿಸಿಕೊಳ್ಳುವುದೇ ಪಾಪ ಎಂದು ದೂಡಲ್ಪಟ್ಟ ಜಾತಿಯಿಂದ ಬಂದು ಸ್ವಪ್ರಯತ್ನದಿಂದ ಐ.ಎ.ಎಸ್. ಅಧಿಕಾರಿಯಾದರೆ ಅದು ನಿಜವಾದ ಸಾಧನೆ. ಅದು ಎಲ್ಲರೂ ಹೆಮ್ಮೆ ಪಡುವಂತದ್ದು.
ಸಮಾಜದಿಂದ ತುಳಿಯಲ್ಪಟ್ಟ ಅತೀಯಾಗಿ ಹಿಂದುಳಿದ ವರ್ಗದ ಭಿಕ್ಷುಕಿ ಮಹಿಳೆಯೊಬ್ಬಳಿಗೆ ಮಗುವಾಗಿ ಜನಿಸಿದ ಕಥಾನಾಯಕ ಸಮಾಜ ಸುಧಾರಕರಾಗಿದ್ದ ನಾರಾಯಣ ಗುರುಗಳು ಸ್ಥಾಪಿಸಿದ ಆಶ್ರಮವೊಂದರಲ್ಲಿ ಕಿರಿಯ ಗುರುಗಳೊಬ್ಬರ ಸಹಾಯದಿಂದ ವಿದ್ಯೆ ಕಲಿತು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಒಬ್ಬ ದೊಡ್ಡ ಐಎಎಸ್ ಅಧಿಕಾರಿಯ ದುರಂತ ಬದುಕಿನ ನೋವಿನ ವ್ಯಥೆಯ ಕಥೆಯನ್ನು ಈ ಕಾದಂಬರಿ ತುಂಬಾ ಚೆನ್ನಾಗಿ ಚಿತ್ರಿಸಿದೆ ಎಂದು ಹೇಳಬಹುದು.
- ಅವಧಿ ವೆಬ್ ಮ್ಯಾಗಜೀನ್ ವಿಮರ್ಶೆಯಲ್ಲಿ ಪ್ರಸನ್ನ ಸಂತೆಕಡೂರು
© 2022 Storyside IN (Audiobook): 9789355441737
Translators: K Prabhakaran
Release date
Audiobook: 25 February 2022
English
India