Step into an infinite world of stories
‘ಅಸ್ಪೃಶ್ಯ’ ಅಂದರೆ, ‘ಮುಟ್ಟಬಾರದ’ ಎಂಬುದು ರೂಢಿಗತ ಅರ್ಥ; ‘ಮುಟ್ಟಲಾಗದ’ ಎಂದೂ ಅದನ್ನು ಅರ್ಥೈಸಬಹುದು. ಈ ಎರಡೂ ಅರ್ಥದ ಅಸ್ಪೃಶ್ಯತೆಗಳನ್ನು ಕುರಿತದ್ದು ಈ ಕಾದಂಬರಿ. ವೈದೇಹಿಯವರ ಈ ಕಾದಂಬರಿಯಲ್ಲಿ ಜಾತಿಜಾತಿಗಳ ನಡುವಿನ ಅಸ್ಪೃಶ್ಯತೆಯ ಕಥೆಯೂ ಕಾಣಸಿಗುತ್ತದೆ, ಜತೆಗೆ, ಒಂದೇ ಸಮುದಾಯದ ಒಂದೇ ಕುಟುಂಬದೊಳಗಿನ ಹಲವಾರು ಅಸ್ಪೃಶ್ಯತೆಯ ಸ್ತರಗಳನ್ನೂ ಕೂಡ ಈ ಕೃತಿಯು ಅನಾವರಣ ಮಾಡಿಸುತ್ತದೆ. ಅಲ್ಲದೆ, ಕುಂದಾಪುರ ಪ್ರಾಂತ್ಯದ ಕಾಲ್ಪನಿಕ ಕಿರುಕುಟುಂಬವೊಂದರ ಈ ಕಥೆಯು ಐತಿಹಾಸಿಕ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಹೋಗುವ ಒಂದು ಸಂಪ್ರದಾಯದ ಕಥನವೂ ಹೌದು; ಮತ್ತು, ಅದು ಬದಲಾವಣೆಗಳನ್ನೆಲ್ಲ ಮೀರಿ ನಿಲ್ಲುವ ಒಂದು ಸಾರ್ವತ್ರಿಕ ಮಾನವ ಕಥನವೂ ಹೌದು. ಸಣ್ಣಸಣ್ಣ ವಿವರಗಳ ಮೂಲಕವೇ ಕಟ್ಟಿಕೊಳ್ಳುತ್ತಹೋಗುವ ಈ ಕಥನಕ್ಕೆ ಕಾದಂಬರಿಯ ಹರಹಿನ ಜತೆಗೆ ಕಾವ್ಯದ ವ್ಯಂಜಕತೆಯೂ ಇದೆಯಾದ್ದರಿಂದಲೇ ಇಲ್ಲಿ ಕಾಣುವ ಸಂಸಾರಚಿತ್ರವು ನಿರ್ದಿಷ್ಟ ದೇಶಕಾಲದ ಒಂದು ಕುಟುಂಬಕಥನವಾಗುವ ಜತೆಗೇ ವಿಶಾಲ ಸಂಸಾರದ ಪ್ರತಿಮೆಯೂ ಆಗುವ ಶಕ್ತಿಯನ್ನು ಪಡೆದುಕೊಂಡಿದೆ.
'Untouchable' can refer to those who cannot be touched and those who cannot be reached. The novel is about the untouchables of both meanings. Vaidehi's novel also features the story of untouchability between castes, as well as several layers of untouchability within the same family.
© 2021 Storyside IN (Audiobook): 9789354341571
Release date
Audiobook: 23 January 2021
English
India